Big Bulletin | BBMP Gives Green Signal To Celebrate Ganeshotsav | Aug 20, 2022

2022-08-20 6

ಬೆಂಗಳೂರಲ್ಲಿ ಗಣೇಶೋತ್ಸವಗಳಿಗೆ ಬಿಬಿಎಂಪಿ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೇ, 15 ದಿನಕ್ಕಿಂತ ಹೆಚ್ಚು ದಿನ ಗಣೇಶ ಕೂರಿಸುವಂತಿಲ್ಲ ಎಂಬ ಷರತ್ತನ್ನು ವಿಧಿಸಿದೆ. ಅಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡೋರಿಗೆ, ಅನುಮತಿಗಾಗಿ ಅಲೆಯುವ ವ್ಯವಸ್ಥೆ ತಪ್ಪಿಸಿದೆ. ಬೆಸ್ಕಾಂ, ಪೊಲೀಸ್, ಬಿಬಿಎಂಪಿ ಅಂತಾ ಪ್ರತ್ಯೇಕವಾಗಿ ಓಡಾಡೋದನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಿದೆ. ಆದ್ರೆ, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಬಿಬಿಎಂಪಿ ಇನ್ನೂ ಅನುಮತಿ ನೀಡಿಲ್ಲ. ಆದರೇನಂತೆ, ಅನುಮತಿ ಸಿಕ್ಕೇ ಸಿಗುವ ವಿಶ್ವಾಸದಲ್ಲಿರುವ ಹಿಂದೂ ಸಂಘಟನೆಗಳು, ಈದ್ಗಾ ಮೈದಾನದಲ್ಲಿ 11 ದಿನ ಗಣೇಶೋತ್ಸವ ಆಚರಿಸ್ತೀವಿ ಎಂದು ಬ್ಯಾನರ್ ಕೂಡ ರೆಡಿ ಮಾಡಿಸಿವೆ. ಆದ್ರೆ, ಮೈದಾನದಲ್ಲಿ ಗಣಪನ ಕೂರಿಸುವ ವಿಚಾರದಲ್ಲಿ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮತ್ತು ಗಣೇಶೋತ್ಸವ ಸಮಿತಿಯ ಮಧ್ಯೆ ಸಮರ ಶುರುವಾಗಿದೆ. ರುಕ್ಮಾಂಗದ ವರ್ಸಸ್ ಇತರರು ಎಂಬಂತಾಗಿದೆ. ಇನ್ನು ಪಾದರಾಯನಪುರದಿಂದ ಟೌನ್‍ಹಾಲ್ ಮಾರ್ಗವಾಗಿ ಮೆರವಣಿಗೆ ನಡೆಸಲು ಪ್ಲಾನ್ ಮಾಡಿವೆ. ಇಂದು ಸ್ಥಳ ಪರಿಶೀಲನೆ ಕೂಡ ಮಾಡಿವೆ.

#publictv #bigbulletin
#publictv #bigbulletin